ಎಲ್ಲರ ಊಹೆಯನ್ನೂ ಜನಶ್ರೀ ವಾಹಿನಿ ಉಲ್ಟಾಪಲ್ಟಾ ಮಾಡಿದೆ. ಎಲ್ಲಿ ಈ ವಾಹಿನಿ ರೆಡ್ಡಿ ಸಹೋದರರ ತುತ್ತೂರಿಯಾಗುತ್ತದೋ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ತನ್ನ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಾಡಿನ ನಾಡಿಮಿಡಿತಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿದೆ.
ನಾಡಿನ ಸಮಸ್ತ ಚಾನಲ್‌ಗಳು ತಮ್ಮ ದಿನಚರಿಯನ್ನು ಜ್ಯೋತಿಷ್ಯ, ಭವಿಷ್ಯದ ಮೂಲಕ ಆರಂಭಿಸಿದರೆ ಜನಶ್ರೀ ಮಾತ್ರ ಇದಕ್ಕೆ ತದ್ವಿರುದ್ಧ. ನಿರುದ್ಯೋಗಿ ಯುವಕ ಯುವತಿಯರಿಗೆ ಉಪಯುಕ್ತವಾದ ಉದ್ಯೋಗವಕಾಶಗಳ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾ ಯುವಕರಿಗೆ ನೆರವಾಗುತ್ತಿದೆ.
ಜನಶ್ರೀ ವಾಹಿನಿಯಲ್ಲಿ ಇನ್ನೂ ಹಲವಾರು ಉಪಯುಕ್ತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಸುದ್ದಿಯ ಪ್ರಸಾರದಲ್ಲಿ ವೇಗವಿಲ್ಲ ಹಾಗೂ ಧಂ ಇಲ್ಲ ಎಂಬ ಆರೋಪಗಳನ್ನು ಹೊರತುಪಡಿಸಿದರೆ, ರೋಚಕವಾಗಿ ಬಿಂಬಿಸುವ, ದಿಗಿಲು ಹುಟ್ಟಿಸುವಂತೆ ಪ್ರಸಾರ ಮಾಡುವ ಸಾಹಸ ಮಾತ್ರ ಕೈಹಾಕಿಲ್ಲ.
ರೆಡ್ಡಿ ಸೋದರರ ಮಾಲೀಕತ್ವದ ವಾಹಿನಿಯಾದರೂ ಅವರ ನಿಲುವು ಒಲವುಗಳನ್ನು ಬದಿಗಿಟ್ಟು ವಾಹಿನಿಯನ್ನು ಜಾಣ್ಮೆಯಿಂದ ಮುನ್ನಡೆಸುತ್ತಿದ್ದಾರೆ ಅನುಭವಿ ಪತ್ರಕರ್ತ ಅನಂತ ಚಿನಿವಾರ್.
Hi, this channel is very boring to watch...
ReplyDeletewhole day same darshan family story is shown..that is today 11-09-2011
better to change the name of the channel to "samsara"
with sub title as "Mane Mane Kathe" that makes sense for this channel.