Monday, December 12, 2011

ಸುವರ್ಣ ವಾಹಿನಿ ಸಮೀಪಕ್ಕೆ ಬಂದು ನಿಂತ ಜನಶ್ರೀ

ಜನಶ್ರೀ ವಾಹಿನಿ ದಿನದಿಂದ ದಿನಕ್ಕೆ ಜನಪ್ರಿಯತೆಯಲ್ಲಿ ಮುನ್ನುಗ್ಗುತ್ತಿದೆ. ಜ್ಯೋತಿಷ್ಯ, ಭವಿಷ್ಯ ಆಧಾರಿತ ಚರ್ಚೆಗಳು, ರೋಚಕತೆ ಬಿಂಬಿಸುವ ಹಸಿಬಿಸಿ ಸುದ್ದಿಗಳಿಂದ ದೂರವಿರುವ ಜನಶ್ರೀ ವಾಹಿನಿಯನ್ನು ಅನಂತ ಚಿನಿವಾರ್ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಟಿಆರ್‌ಪಿಯಲ್ಲೂ ವಾಹಿನಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ.


ಜನಶ್ರೀ ವಾಹಿನಿಯಲ್ಲಿ ವಿಶೇಷವಾಗಿ ಗಮನಸೆಳೆಯುತ್ತಿರುವ ಕಾರ್ಯಕ್ರಮಗಳೆಂದರೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಉದ್ದೇಶವಾಗಿಟ್ಟು ಬಿತ್ತರವಾಗುತ್ತಿರುವ ಕಾರ್ಯಕ್ರಮಗಳು. ಗಣಿಧಣಿಗಳ ರಾಜಕೀಯ ಮುಖವಾಣಿಯಂತೆ ಎಂದೂ ತೋರಿಸಿಕೊಳ್ಳದ ಜನಶ್ರೀಗೆ ಇತ್ತೀಚೆಗೆ ನಡೆದ ಉಪಚುನಾವಣೆಯ 'ಫ್ಯಾನ್' ಗಾಳಿ ಮಾತ್ರ ತಕ್ಕಮಟ್ಟಿಗೆ ಪ್ರಭಾವ ಬೀರಿತ್ತು.

ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ ಸುವರ್ಣ ಮತ್ತು ಜನಶ್ರೀ ನಡುವೆ ತೀವ್ರ ಪೈಪೋಟಿ ನಡೆದಿದೆ. ಬೆಂಗಳೂರೇತರ ಕರ್ನಾಟಕದಲ್ಲೂ ಜನಶ್ರೀ ಮುನ್ನುಗ್ಗುತ್ತಿದೆ. ಆದರೆ ಟಿವಿ 9 ಕನ್ನಡ ಸುದ್ದಿ ವಾಹಿನಿ ಮುಂದೆ ಉಳಿದೆಲ್ಲಾ ಕನ್ನಡ ಸುದ್ದಿ ವಾಹಿನಿಗಳು ಹಿಂದೆ ಹಿಂದೆ. ಏತನ್ಮಧ್ಯೆ ರಂಗನಾಥ್ ಅವರ ಹೊಸ ಚಾನಲ್ ಹಾಗೂ ಕಸ್ತೂರಿ ನ್ಯೂಸ್ 24 ಹೊಸ ಚಾನಲ್‌ಗಳು ವಾಹಿನಿಗಳ ನಡುವಿನ ತೀವ್ರ ಸ್ಪರ್ಧೆಗೆ ಕಾರಣವಾಗಲಿವೆ.

No comments:

Post a Comment